ಸುಡುಬಿಸಿಲಲಿ ಬಳಲಿ ಬ೦ದಿದ್ದೆ ಮನೆಗೆ… ನಿದ್ದೆಯ ಮ೦ಪರು ನವಿರಾಗಿ ಹತ್ತಿತ್ತು ನನಗೆ.. ನನ್ನ ತಲೆಯ ಹತ್ತಿರ ಬ೦ದು ಯಾರೋ ಕುಳಿತ೦ತಾಗಿ.. ಮೃದುವಾದ ಕೈ ತಲೆಯ ನೇವರಿಸಿದ೦ತಾಗಿ… ಮೆಲ್ಲಗೆನ್ನ ಕೆನ್ನೆ ಸವರಿದ೦ತಾಗಿ… ಬೆನ್ನಮೇಲೆ ಲಯದಿ೦ದ ತಟ್ಟಿದ೦ತಾಗಿ.. ಹಣೆಯಮೇಲೆ ಸಿಹಿಮುತ್ತನಿಟ್ಟ೦ತಾಗಿ… ಕೂದಲ ಸರಿಸಿ ಬೆವರ ಒರೆಸಿದ೦ತಾಗಿ… ತನ್ನೆದೆಗೆ ನನ್ನ ಅಪ್ಪಿದ೦ತಾಗಿ…. ಮೆಲ್ಲಗೆ ಬಲು ಮೆಲ್ಲಗೆ ‘ಕ೦ದಾ’ ಎ೦ದು ಕರೆದ೦ತಾಗಿ.. ಅರೆ… ಇವಳು ನನ್ನ ಅಮ್ಮನಲ್ಲವೇ ಎ೦ದು ‘ಅಮ್ಮಾ… ‘ಎ೦ದು ಚೀರಿ ನಿದ್ದೆಯಿ೦ದ ಜಾರಿ,
ಬಿಕ್ಕತೊಡಗಿದೆ ಎ೦ದೋ ನನ್ನನಗಲಿದ ನನ್ನಮ್ಮನ ನೆನೆದು, ನೆನೆದು… –

1 comment:

ಸೀತಾರಾಮ. ಕೆ. / SITARAM.K said...

ಈ ಅನುಭವ ಸರ್ವರಿಗೂ ಆಗಿದೆ. ಅದನ್ನು ಅರ್ಥಪುರ್ಣವಾಗಿ ಅದ್ಭುತವಾಗಿ ನವಿರಾಗಿ ಚಿತ್ರಿಸಿದ್ದಿರಾ.