ಎಲ್ಲಿ ಸಲ್ಲುವರಯ್ಯ...

ಕತ್ತಲೋಡೀಸಿ ಬೆಳಕ ಕೊಡುವ ದೀಪದಲಿ
ಉರಿಯುವ ಬತ್ತಿ, ಉರಿಸುವ ಎಣ್ಣೆ ಇಲ್ಲದಿರೆ
ಬರೀ ಕರೀ ಕತ್ತಲೆಯೇ ಅದರಲಿ...
ದೀಪಕೆ ಸಲ್ಲುವ ಗೌರವಾದರಗಳು
ತನ್ನನೇ ಉರಿಸಿ ಬೆಳಕನೀಯುವ ಎಣ್ಣೆಬತ್ತಿಗಳಿಗೇಕೆ ಸಲ್ಲದಿಲ್ಲಿ...?
-ಪ್ರೇಮಾ

1 comment:

ಸೀತಾರಾಮ. ಕೆ. / SITARAM.K said...

ಎಣ್ಣೆ ಬತ್ತಿಗಳ ಮಿಲನದ ಅಗ್ನಿಯೇ ದೀಪ.
ಹಾಗಾಗಿ ಎಣ್ಣೆಬತ್ತಿಯಿಲ್ಲದೇ, ಅವುಗಳ ಅಗ್ನಿ ಆಹುತಿ ಇಲ್ಲದೇ ದೀಪ ದೀಪವೆನಿಸದೆ ಬರೀ ಬಟ್ಟಲಾಗುವುದು. ಏನ೦ತೀರಾ ?