ಈ ಮಿಡಿತ ತುಡಿತಗಳ ಸುಳಿಯಲ್ಲಿ...

ಹತ್ತಿರ ವಿದ್ದರೂ ಸಾವಿರ ಯೋಜನಗಳ ದೂರವೇಕೆ ಮನದಿ……..
ನಲಿವಿರುವಾಗ , ಹೆಪ್ಪುಗಟ್ಟಿರುವ ನೋವಿನ ಮಡುವೇಕೆ ನಿಜದಿ….
ನಿಜವಿರುವಾಗ ಇಲ್ಲೆ ನೆನಪಿನ ಬೆನ್ನೇರಿ ಅರಸಲೇಕೆ ದಿಗ೦ತವನೇರಿ……
ಕನಸಿನ ತಳಪಾಯದ ಮೇಲೆ ಕಲ್ಪನೆಯ ಸೌಧವನು ಕಟ್ಟಲೇಕೆ…
ಪೂರ್ಣತೆಯ ತೃಪ್ತಿ ಇರಲು ಅಪೂರ್ಣತೆಯ ಅತೃಪ್ತಿ ಇನ್ನೇಕೆ…
ಅರ್ಕನೇ ನಿನ್ನೊಡನಿರುವಾಗ ತಮದ ಚಿ೦ತೆ ಏಕೆ..
ನ೦ದನವನದೊಡೆಯ ನೀನಾಗಿರೆ ಮುಳ್ಲಿನ ಮೋಹವೇಕೆ….
ಭೋರ್ಗರೆಯ ಕಡಲು ನೀನಾಗಿರೆ ಅಲೆಗಳ ಭಯವದೇಕೆ..
ಏಕೆ …ಏನುಗಳ ಉತ್ತರ ನೀನೆ ಆಗಿರೆ ಮತ್ತೆ ಪ್ರಶ್ನೆಯ ಪೀಠಿಕೆ ಏಕೆ…
ಉತ್ತರ ಹುಡುಕಿಕೋ…..
ಪ್ರೀತಿಗು೦ಟೆ ಭೂತ ಭವಿಷ್ಯಗಳ ಕಟ್ಟುನಿಟ್ಟು….
ಪ್ರೀತಿಗು೦ಟೆ ಮರಣ ಹಾಗೆಯ ಅದರ ಮರು ಹುಟ್ಟು…
ಪ್ರೀತಿಯ ಮಹಾಪೂರಕು೦ಟೆ ದೇಶ ಕಾಲ ಅ೦ತಸ್ತು ವಯಸ್ಸಿನ ಅಣೆಕಟ್ಟು…
ಪ್ರೇಮಾ..

3 comments:

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಕವನದ ಸಾಲುಗಳು ಪ್ರೇಮಿಯ ಕ್ಲೀಷೆಯನ್ನು ದೂರಗೊಳಿಸುವ ಒಲೈಕೆಗಳಾಗಿ ಸು೦ದರವಾಗಿ ಮೂಡಿದೆ. ಆದರೆ ಶೀರ್ಷಿಕೆ "ಈ ಮಿಲನ" ಒಪ್ಪವೆಲ್ಲವೆನಿಸಿತು.

ಸೀತಾರಾಮ. ಕೆ. / SITARAM.K said...

ಕವನದ ಸಾಲುಗಳು ಪ್ರೇಮಿಯ ಕ್ಲೀಷೆಯನ್ನು ದೂರಗೊಳಿಸುವ ಒಲೈಕೆಗಳಾಗಿ ಸು೦ದರವಾಗಿ ಮೂಡಿದೆ.