ಹನಿಯೇ ... ಮುತ್ತಿನ ಮಣಿಯೆ..

ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು
ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಲೆಡೆ ಜಾರದೆ ,
ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ...
ರಮಣಿಯ ಕೊರಳ ಮಣಿಯಾಗಿ ಮೆರೆದೆ....
ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ ...

1 comment:

ಸೀತಾರಾಮ. ಕೆ. / SITARAM.K said...

ಕವನ ಓದಿ ಮನ ಪುಲಕಗೊ೦ಡಿತು. ರಮಣೀಯ ಕಲ್ಪನೆ. ನೋಡಿದ್ರಾ ಚಿಪ್ಪು, ಮುತ್ತು, ಬ೦ಧ, ಅನುಬ೦ಧ, ಅಗಲಿಕೆ, ತಾಯಿ ಪ್ರೇಮ, ತವರು, ಪ್ರೇಮಿ ಪ್ರೇಮ, ಕೊರಳಲ್ಲಿ ಮೆರೆ, ಇತ್ಯಾದಿ ಎ೦ದು ಅರ್ಥಗಳ ಅನೂಹ್ಯ ಭ೦ಡಾರವೇ ಬಯಲಾಗುತ್ತಿದೆ. ಅರ್ಥಗಳ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಮುತ್ತಿನ೦ತೆ ಹೊಳೆಯುತ್ತಿದೆ ತಮ್ಮ ಹನಿಗವನ.