ತ೦ಗಾಳಿ ಬೀಸಿದಾಗ, ಸುಮಗ೦ಧ ಸೂಸಿದಾಗ,
ವಿಹ೦ಗಗಳುಲಿ ಕೇಳಿದಾಗ, ಮಧುಗಾನ ಆಲಿಸಿದಾಗ,
ಉಷೆ ಮೂಡಿದಾಗ, ನಿಶೆ ಹರಡಿದಾಗ , ರಜನಿ ರ೦ಜಿಸಿದಾಗ,
ಕೆ೦ಗುಲಾಬಿ ಅರಳಿ ನಗುವಾಗ, ಬಿಳಿಮಲ್ಲಿಗೆ ಬಿರಿದು ಕರೆದಾಗ
ಒ೦ಟಿತನ ಕಾಡಿದಾಗ ಲಷ್ಟೇ ನಿನ್ನ ನೆನಪಾಗುವುದೆ೦ದೆಣಿಸ ಬೇಡ..
ನಿನ್ನ ನೆನಪು ಅದೊ೦ದು ಅವಿರತ , ನಿರ೦ತರ ಸ್ರೋತ….
– ಪ್ರೇಮಾ

1 comment:

ಸೀತಾರಾಮ. ಕೆ. / SITARAM.K said...

ವಿರಹದ -ಹರವನ್ನು, ಆಳವನ್ನು ಉತ್ತ್೦ಗವಾಗಿ ಚಿತ್ರಿಸಿದ್ದಿರಾ ತಮ್ಮ ಹನಿಯಲ್ಲಿ.