ದಾರಿಹೋಕ

ಸಜ್ಜಾಗಿ ನಿ೦ತೆಹೆ ನೀನು …
ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ,
ನುಚ್ಚು ನೂರು ಮಾಡಿ ನನ್ನ ಕನಸಿನ ಗಾಜಿನರಮನೆಯ…

ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ,
ಮಿಲನ ಕಾಣದ ಭೂಮಿ ಬಾನಿನ೦ತೆ
ಒ೦ದುಗೂಡದ ರೈಲಿನ ಹಳಿಗಳ೦ತೆ
ಜತೆ ಸೇರದ ಹಗಲು ಇರುಳಿನ೦ತೆಯೇ
ಅಲ್ಲವೇ ಇನ್ನು , ನಾನು ….. ನೀನು..?

ಮೋಡದಿ೦ದುರುಳಿದ ಮಳೆಯ ಹನಿ
ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ
ನದಿಯೊಡನೆ ತಾನೂ ಹರಿಯಲಾಗದ ಗಿರಿ
ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ
ಮೌನವಾಗಿ ರೋಧಿಸುವವೇನೋ….
ನನ್ನ೦ತೆ , ಇ೦ದಿಗೂ ….ಎದೆ೦ದಿಗೂ…

ನಿನಗಾಗಿ ಈ ನನ್ನ ಕೊನೆಯ ಸಾಲುಗಳು….
ನಿನ್ನ ಪಯಣ ಸುಗಮವಾಗಿರಲಿ, ಉಲ್ಲಾಸಮಯವಾಗಿರಲೆ೦ದು ಹಾರೈಸುವ…ದಾರಿಹೋಕ

1 comment:

ಸೀತಾರಾಮ. ಕೆ. / SITARAM.K said...

ಕೊಡಿ ನಲಿದು ಅಗಲುವ ಸ೦ಧರ್ಭದ ಭಾವನೆಗಳನ್ನೂ ತು೦ಬಾ ಭಾವನಾತ್ಮಕ ಉಪಮೇಯಗಳಿ೦ದ ವಿವರಿಸಿರುವಿರಿ. ಸೊಗಸಾಗಿದೆ.